विवेकोदयः -Notes
विवेकोदयः -Notes
अष्टमः पाठः - विवेकोदयः
१ एकनवाक्येन उत्तरं लिखत
१. भोजस्य पिता कः? = सिन्धुलः
२. कापालिकः कथम् आसीत्? = मूर्तिमान् चन्द्रचूडः इव
३. भोजः कुत्र हन्तव्यः ? = भुवनेश्वरीविपिने
४. वत्सराजः कदा भोजकुमार गुरुकुलादनाययत्? = लम्बमाने दिवाकरे
२ रिक्तस्थानं पूरयत
१. तदुत्सङ्गे............ मुमोच । = भोजं
२. वत्सराजस्य आकारणाय .............. प्राहिणोत् । = स्वमङ्गरक्षकं
३. भोजभूपालः ................ राज्यं पालयामास । = देवप्रसादात्
१. विपिनम् = अरण्यम् | अटवी / गहनम् | काननम् / वनम्
२. दशास्यः = रावणः
३. दिवाकरः = सूर्यः / भास्करः
४. क्षितिपालः = राजा / नृपः / पार्थिवः / भूपः
४ अन्यलिङ्गपदं लिखत
१. राजा = राज्ञी २. योगी = योगिनी
३. पुत्रः = पुत्री ४. बालः = बाला
५. लिङ्ग-विभक्ति-वचनानि लिखत
१. उद्यमे = पुंलिंगः । सप्तमीविभक्तिः । एकवचनम् ।
२. हानिः = स्त्रीलिंगः। प्रथमाविभक्तिः । एकवचनम् ।
३. तव = त्रिलिङ्गकः । षष्ठीविभक्तिः । एकवचनम् ।
४. राजन् = पुंलिंगः। सम्बोधन-प्रथमा-विभक्तिः। एकवचनम् ।
१. भोजस्य जन्मपत्रिकां दृष्ट्वा दैवज्ञः किमाह ?
उत्तरम्- पञ्चाशत्पञ्चवर्षाणि सप्तमासा दिनत्रयम् । भोजराजेन भोक्तव्यो सगौडो दक्षिणापथः ॥
इति दैवज्ञः आह ।
2. बुद्धिसागरः मुञ्ंज किं प्राह ?
उत्तरम्- बुद्धिसागरः- मुञ्जं- “यथा त्वं राजाधमः तथैव अमात्याधमो वत्सराजः ।
राज्ञि धर्मिणि धर्मिष्ठाः पापे पापपरास्सदा । राजानामनुवर्तन्ते यथा राजा तथा प्रजाः ॥” इति प्राह ।
७ यथानिर्दरेशं लिखत
१. “ सहसा वहिनमाविश"
कः पाठः ? = विवेकोदयः इति पाठः
के अवदन् ? = ब्राह्मणाः अवदन्
कम् अवदन् ? = मुजम् अवदन्
२. मया भोजो रक्षितः
कः पाठः ? = विवेकोदयः इति पाठः
कः वदति? वत्सराजः।
कं वदति? ? = बुद्धिसागरम्॥
८. दशवाक्यैः उत्तरं संस्कृतभाषया कन्नडभाषया आङ्ग्लभाषया वा लिखत
१. किमर्थं मुञ्जः भोजं मारयितुं प्रयतते ?
ಧಾರಾನಗರದ ರಾಜನಾದ ಸಿಂಧುಲನ ತಮ್ಮನೇ ಮುಂಜನು. ಸಿಂಧುಲನಿಗೆ ಮುಪ್ಪಿನಲ್ಲಿ ಭೋಜನೆಂಬ ಪುತ್ರನು ಜನಿಸಿದನು. ಭೋಜನಿಗೆ ಐದು ವರ್ಷಗಳಾದಾಗ ಸಿಂಧುಲನು ತನ್ನ ಮುಪ್ಪನ್ನು ಅರಿತು, ತನ್ನ ತಮ್ಮನಾದ ಮುಂಜನು ಪರಾಕ್ರಮಿ ಎಂದು ತಿಳಿದು, ಮುಂಜನನ್ನು ಬಿಟ್ಟು ಮಗನಿಗೆ ರಾಜ್ಯವನ್ನು ಕೊಟ್ಟರೆ, ರಾಜ್ಯದ ಆಸೆಯಿಂದ ಮುಂಜನು ಭೋಜನನ್ನು ಕೊಲ್ಲಬಹುದೆಂದು ಯೋಚಿಸಿ, ರಾಜ್ಯವನ್ನು ತಮ್ಮನಿಗೆ ನೀಡಿ, ಆತನ ತೊಡೆಯ ಮೇಲೆ ತನ್ನ ಮಗನಾದ ಭೋಜನನ್ನು ಕುಳ್ಳಿರಿಸಿದನು.
ಕಾಲಕಳೆದಂತೆ ಸಿಂಧುಲರಾಜನು ಮೃತನಾಗಲು, ರಾಜ್ಯಸಂಪತ್ತನ್ನು ಪಡೆದ ಮುಂಜನು ಗುರುಗಳನ್ನು ನೇಮಿಸಿ ರಾಜಪುತ್ರನಾದ ಭೋಜನನ್ನು ಓದಿಸಿದನು. ಒಮ್ಮೆ ಮುಂಜನಿಗೆ ದೈವಜ್ಞನಾದ ಒಬ್ಬ ಪಂಡಿತನು ಭೋಜನ ಜನ್ಮ ಪತ್ರಿಕೆಯನ್ನು ನೋಡಿ, “ಭೋಜನು ಐವತ್ತೈದು ವರ್ಷ, ಏಳು ತಿಂಗಳು ಮೂರು ದಿನಗಳವರೆಗೆ ಗೌಡದೇಶದಿಂದ ಕೂಡಿದ ದಕ್ಷಿಣಾಪಥವನ್ನು ಆಳುತ್ತಾನೆ' ಎಂದು ಹೇಳಿದನು. ಇದನ್ನು ಕೇಳಿಸಿಕೊಂಡ ಮುಂಜನು ಮೇಲೆ ನಗುತ್ತಾ, ಆಂತರ್ಯದಲ್ಲಿ ಚಿಂತೆಗೊಳಗಾದನು. ರಾಜ್ಯ ಸಂಪತ್ತು ಭೋಜನಿಗೆ ಸೇರಿದರೆ, ನಾನು ಬದುಕಿದರೂ ಸತ್ತಂತೆ ಎಂದು ಯೋಚಿಸಿ, ರಾಜ್ಯ ಸಂಪತ್ತನ್ನು ತಾನೇ ಅನುಭವಿಸಬೇಕೆಂಬ ಆಸೆಯಿಂದ ಭೋಜನನ್ನು ಕೊಲ್ಲುವಂತೆ ಸಾಮಂತರಾಜನಾದ ವತ್ಸರಾಜನಿಗೆ ಆದೇಶಿಸಿದನು.
ಭೋಜನು ೫೫ ವರ್ಷ, ೭ ತಿಂಗಳು ೩ ದಿನಗಳವರೆಗೆ ಗೌಡದೇಶದಿಂದ ಕೂಡಿದ ದಕ್ಷಿಣಾಪಥವನ್ನು ಆಳುತ್ತಾನೆಂಬ ದೈವಜ್ಞನ ಮಾತನ್ನು ಕೇಳಿದ ಮುಂಜನು ಭೋಜನನ್ನು ರಹಸ್ಯವಾಗಿ ಕೊಲ್ಲಲು ತನ್ನ ಸಾಮಂತರಾಜನಾದ ವತ್ಸರಾಜನನ್ನು ನಿಯಮಿಸುತ್ತಾನೆ. ರಾಜಾಜ್ಞೆಯಂತೆ ವತ್ಸರಾಜನು ಭುವನೇಶ್ವರೀ ಕಾಡಿನತ್ತ ರಥವನ್ನು ಕೊಂಡೊಯ್ದು ಗುರುಕುಲದಿಂದ ಭೋಜಕುಮಾರನನ್ನು ಕರೆಸಿ ರಥದಲ್ಲಿ ಕುಳ್ಳಿರಿಸಿಕೊಂಡು ಮಹಾಮಾಯಾಭವನಕ್ಕೆ ತೆರಳುತ್ತಾನೆ. ಭೋಜನಿಗೆ ರಾಜಾಜ್ಞೆಯನ್ನು ತಿಳಿಸುತ್ತಾನೆ. ಆಗ ಭೋಜನು ಆಲದೆಲೆಯಲ್ಲಿ ತನ್ನ ಮೊಣಕಾಲಿನ ರಕ್ತವನ್ನು ತುಂಬಿ, ಹುಲ್ಲು ಕಡ್ಡಿಯ ಸಹಾಯದಿಂದ ಇನ್ನೊಂದು ಎಲೆಯಲ್ಲಿ ಶ್ಲೋಕವೊಂದನ್ನು ಬರೆದು, “ ಈ ಪತ್ರವನ್ನು ರಾಜನಿಗೆ ನೀಡು, ನೀನು ರಾಜಾಜ್ಞೆಯನ್ನು ಪಾಲಿಸು” ಎಂದು ಹೇಳಿದನು. ಅವನ ದೃಢಮನಸ್ಸನ್ನು ಕಂಡ ವತ್ಸರಾಜನು ಕೊಲ್ಲುವ ಕಾರ್ಯದಿಂದ ವಿಮುಖನಾಗಿ, 'ಕ್ಷಮಿಸು' ಎಂದು ಹೇಳುತ್ತಾ, ಭೋಜನಿಗೆ ನಮಸ್ಕರಿಸಿ, ಅವನನ್ನು ರಥದಲ್ಲಿ ಕುಳ್ಳಿರಿಸಿಕೊಂಡು, ನಗರದ ಹೊರಗಿರುವ ಮನೆಯೊಂದಕ್ಕೆ ದಟ್ಟವಾದ ಕತ್ತಲಿನಲ್ಲಿಯೇ ತಲುಪಿ, ನೆಲಮಾಳಿಗೆಯೊಂದರಲ್ಲಿ ಅವನನ್ನು ಇಟ್ಟು ಕೊಲ್ಲದೇ ರಕ್ಷಿಸಿದನು. ಭೋಜನ ಕೃತ್ರಿಮವಾದ ತಲೆಯೊಂದನ್ನು ಮಾಡಿಸಿ, ಅದಕ್ಕೆ ಭೋಜನ ಕುಂಡಲಗಳನ್ನು ತೊಡಿಸಿ, ರಾಜನಿಗೆ ತೋರಿಸಿ, ಭೋಜನನ್ನು ರಕ್ಷಿಸಿದನು.